Norton Safe Web
ID
fnpbeacklnhmkkilekogeiekaglbmmkaನೀವು ವೆಬ್ ಬ್ರೌಸ್ ಮಾಡುವಾಗ Norton Safe Web ಆನ್ಲೈನ್ ಬೆದರಿಕೆಗಳಿಂದ ರಕ್ಷಣೆ ಒದಗಿಸುತ್ತದೆ.
ಸ್ಕ್ರೀನ್ಶಾಟ್ಗಳು
ವಿವರಣೆ
ನೀವು ವೆಬ್ ಬ್ರೌಸ್ ಮಾಡುವಾಗ Norton Safe Web ಆನ್ಲೈನ್ ಬೆದರಿಕೆಗಳಿಂದ ರಕ್ಷಣೆ ಒದಗಿಸುತ್ತದೆ.
ನೀವು ಆನ್ಲೈನ್ನಲ್ಲಿ ಹುಡುಕುವಾಗ, ಖರೀದಿಸುವಾಗ ಅಥವಾ ಬ್ರೌಸ್ ಮಾಡುವಾಗ ಅಪಾಯಕಾರಿ ತಾಣಗಳ ಬಗ್ಗೆ ಎಚ್ಚರಿಸುವ ಮೂಲಕ Norton Safe Web ನಿಮ್ಮ ಗುರುತಿನ ಕಳವು ಮತ್ತು ಆನ್ಲೈನ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಲು ನೆರವಾಗುತ್ತದೆ.
ಇತ್ತೀಚಿನ ಬೆದರಿಕೆಗಳ ಮಾಹಿತಿಯೊಂದಿಗೆ ನಿಯತಕಾಲಿಕವಾಗಿ ನವೀಕರಿಸಲಾಗುವ Norton ನ Remote URL Reputation Service ಅನ್ನು ಸಂಪರ್ಕಿಸಿ, ನೀವು ಲೋಡ್ ಮಾಡುವ ಪ್ರತಿಯೊಂದು ಪುಟಕ್ಕೂ Norton Safe Web ಸುರಕ್ಷತಾ ಮಾಹಿತಿಯನ್ನು ಒದಗಿಸುತ್ತದೆ. ನಿಮಗೆ ಸುರಕ್ಷಿತ ಆನ್ಲೈನ್ ಅನುಭವವನ್ನು ನೀಡಲು Norton Safe Web ಹಾನಿಕಾರಕ ಪುಟಗಳು ಮತ್ತು ಡೌನ್ಲೋಡ್ಗಳನ್ನು ಸ್ವಯಂಚಾಲಿತವಾಗಿ ತಡೆಯುತ್ತದೆ.
---
ವಿಸ್ತರಣೆಯೊಳಗೆ ಅಗತ್ಯ ಕಾರ್ಯಗಳನ್ನು ನಿರ್ವಹಿಸಲು ಈ ವಿಸ್ತರಣೆಯು ಬಳಸುವ ಅನುಮತಿಗಳಿಂದ Chrome ನಲ್ಲಿ ಈ ಕೆಳಗಿನ ಸಂದೇಶಗಳು ಕಾಣಿಸಿಕೊಳ್ಳುತ್ತವೆ.
“ನೀವು ಭೇಟಿ ನೀಡುವ ವೆಬ್ಸೈಟ್ಗಳಲ್ಲಿನ ನಿಮ್ಮ ಎಲ್ಲ ಡೇಟಾವನ್ನು ಓದುವುದು ಮತ್ತು ಬದಲಾಯಿಸುವುದು”
ನೀವು ಬ್ರೌಸ್ ಮಾಡುವ ಎಲ್ಲ ರೀತಿಯ ಪುಟಗಳಲ್ಲಿನ ಆನ್ಲೈನ್ ಅಪಾಯಗಳನ್ನು ಪತ್ತೆಹಚ್ಚಲು ಬೇಕಾದ ಅನುಮತಿಗಳಿಗಾಗಿ ಇದನ್ನು ತೋರಿಸಲಾಗುತ್ತದೆ.
“ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ಓದುವುದು”
ಈ ಕೆಳಗಿನ ಕಾರ್ಯಗಳಿಗೆ ಬೇಕಾದ ಅನುಮತಿಗಳಿಗಾಗಿ ಇದನ್ನು ತೋರಿಸಲಾಗುತ್ತದೆ:
- ಅಪಾಯಕಾರಿ ವಿಷಯ ಪತ್ತೆಯಾದಾಗ ತಡೆಯಲಾಗಿದೆ ಎಂದು ತಿಳಿಸುವ ಪುಟವನ್ನು ತೋರಿಸುವುದು.
- Chrome ಅಥವಾ ಬಳಕೆದಾರರು ಟ್ಯಾಬ್ಗಳಲ್ಲಿ ಬದಲಾವಣೆಗಳನ್ನು ಮಾಡುವಾಗ ತಾಣದ ಸುರಕ್ಷತಾ ರೇಟಿಂಗ್ ಮಾಹಿತಿಯನ್ನು ವಿಶ್ವಾಸಾರ್ಹವಾಗಿ ತೋರಿಸುವುದು.
“ನಿಮ್ಮ ಡೌನ್ಲೋಡ್ಗಳನ್ನು ನಿರ್ವಹಿಸುವುದು”
ಹಾನಿಕಾರಕ ಡೌನ್ಲೋಡ್ಗಳನ್ನು ತೆಗೆದುಹಾಕಲು ಬೇಕಾದ ಅನುಮತಿಗಾಗಿ ಇದನ್ನು ತೋರಿಸಲಾಗುತ್ತದೆ.
“ಅಧಿಸೂಚನೆಗಳನ್ನು ತೋರಿಸುವುದು”
ರಕ್ಷಣಾ ಚಟುವಟಿಕೆಯಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸಿದಾಗ ಅಥವಾ ಕೆಲವು ವೈಶಿಷ್ಟ್ಯಗಳಿಗೆ ಗುರುತು ದೃಢೀಕರಣದ ಅಗತ್ಯವಿದ್ದಾಗ ಎಚ್ಚರಿಕೆಗಳನ್ನು ತೋರಿಸಲು ಬೇಕಾದ ಅನುಮತಿಗಳಿಗಾಗಿ ಇದನ್ನು ತೋರಿಸಲಾಗುತ್ತದೆ.
“ಹೊಸ ಹಿನ್ನೆಲೆ ಅಪ್ಲಿಕೇಶನ್ ಸೇರಿಸಲಾಗಿದೆ
ಸಿಸ್ಟಮ್ ಪ್ರಾರಂಭವಾದಾಗ Norton Safe Web ಪ್ರಾರಂಭವಾಗುತ್ತದೆ ಮತ್ತು ನೀವು ಇತರ ಎಲ್ಲ Google Chrome ವಿಂಡೋಗಳನ್ನು ಮುಚ್ಚಿದ ನಂತರವೂ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ.”
ಪ್ರಾರಂಭವಾಗಲು ಬೇಕಾಗುವ ಸಮಯವನ್ನು ಕಡಿಮೆ ಮಾಡುವುದಕ್ಕಾಗಿ ವಿಸ್ತರಣೆಯು ಕಾರ್ಯನಿರ್ವಹಿಸುತ್ತಿರುವಂತೆ ಇರಿಸಲು ಬಳಸುವ ಅನುಮತಿಗಾಗಿ ಇದನ್ನು ತೋರಿಸಲಾಗುತ್ತದೆ.
ವಿಸ್ತರಣೆಯೊಳಗೆ ಕೆಲವು ಕಾರ್ಯಗಳನ್ನು ನಿರ್ವಹಿಸಲು, Chrome ನಲ್ಲಿ ತೋರಿಸದಿರುವ ಅನುಮತಿಗಳನ್ನೂ ಈ ವಿಸ್ತರಣೆಯು ಬಳಸುತ್ತದೆ:
“webRequest” ಮತ್ತು “webRequestBlocking” ಅನುಮತಿಗಳು
ಈ ಕೆಳಗಿನ ಕಾರ್ಯಗಳಿಗೆ ಅಗತ್ಯವಿವೆ:
- ಕೆಲವು ಬೆದರಿಕೆಗಳನ್ನು ತಡೆಯಲು ನೆರವಾಗುವಂತೆ, ವೆಬ್ಸೈಟ್ಗಳನ್ನು ಬ್ರೌಸ್ ಮಾಡುವಾಗ ಕೆಳಮಟ್ಟದ ತಾಂತ್ರಿಕ ಡೇಟಾವನ್ನು ಪ್ರವೇಶಿಸುವುದು.
- ಕೆಲವು ವೈಶಿಷ್ಟ್ಯಗಳಿಗೆ ಗುರುತು ದೃಢೀಕರಣವನ್ನು ನಡೆಸುವುದು.
“storage” ಅನುಮತಿ
ವಿಸ್ತರಣೆಯು ಬಳಸುವ ಸೆಟ್ಟಿಂಗ್ಗಳ ಡೇಟಾವನ್ನು ಸಂಗ್ರಹಿಸಲು ಮತ್ತು ಮತ್ತೆ ಪಡೆಯಲು ಬಳಸಲಾಗುತ್ತದೆ.
---
---
ಈ ಆಡ್-ಆನ್ ಬಳಸುವ ಮೂಲಕ, ನೀವು ನಮ್ಮ ಪರವಾನಗಿ ಮತ್ತು ಸೇವೆಗಳ ಒಪ್ಪಂದಕ್ಕೆ (https://www.nortonlifelock.com/content/dam/nortonlifelock/pdfs/eulas/licensing-agreement/customer-agreement-en.pdf) ಸಮ್ಮತಿಸುತ್ತೀರಿ ಮತ್ತು ನಮ್ಮ ಜಾಗತಿಕ ಗೌಪ್ಯತಾ ಹೇಳಿಕೆಯನ್ನು (https://www.nortonlifelock.com/us/en/privacy/global-privacy-statement/) ಓದಿದ್ದೀರಿ ಹಾಗೂ ಅದನ್ನು ಅಂಗೀಕರಿಸುತ್ತೀರಿ.
ಈ ಆಡ್-ಆನ್ ಗಂಭೀರ ದೋಷಗಳು ಮತ್ತು ವೈಶಿಷ್ಟ್ಯಗಳ ಬಳಕೆಯ ಮಾಹಿತಿಯನ್ನು Google Analytics ಸೇವೆಗಳಿಗೆ ರವಾನಿಸಲು Google Analytics ನ Measurement Protocol ಅನ್ನು ಬಳಸುತ್ತದೆ. ಈ ಆಡ್-ಆನ್ ಅನ್ನು ನಿರ್ವಹಿಸಲು ಮತ್ತು ಸುಧಾರಿಸಲು NortonLifeLock, Google Analytics ಸೇವೆಗಳನ್ನು ಬಳಸುತ್ತದೆ, ಆದರೆ ಆ ಸೇವೆಗಳನ್ನು NortonLifeLock ನಿರ್ವಹಿಸುವುದಿಲ್ಲ.
ಈ ಡೇಟಾ ಸಂಗ್ರಹಣೆ ಮತ್ತು ಬಳಕೆಗೆ ನೀವು ಸಮ್ಮತಿಸದಿದ್ದರೆ, ದಯವಿಟ್ಟು ಈ ಆಡ್-ಆನ್ ಅನ್ನು ಸ್ಥಾಪಿಸಬೇಡಿ ಅಥವಾ ಈಗಾಗಲೇ ಸ್ಥಾಪಿಸಿದ್ದರೆ ಅದನ್ನು ತೆಗೆದುಹಾಕಿ.
Google Analytics ನಲ್ಲಿ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವಾಗ ನಿಮ್ಮ IP ವಿಳಾಸವನ್ನು ಮರೆಮಾಚಲು Google ಒದಗಿಸುವ ನಿಯತಾಂಕಗಳನ್ನು ಈ ಆಡ್-ಆನ್ ಹೊಂದಿಸುತ್ತದೆ. Google Analytics ಬಳಸುವಾಗ ನಾವು ಪಾಲಿಸಬೇಕಾದ ಬಾಧ್ಯತೆಗಳು, Google ನ ಗೌಪ್ಯತಾ ಕ್ರಮಗಳು ಮತ್ತು IP ವಿಳಾಸವನ್ನು ಮರೆಮಾಚಲು Google ಒದಗಿಸುವ ಬೆಂಬಲದ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಿ:
- https://developers.google.com/analytics/policy
- https://support.google.com/analytics/answer/6004245
- https://support.google.com/analytics/answer/2763052
ಹಕ್ಕುಸ್ವಾಮ್ಯ © 2021 NortonLifeLock Inc. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. NortonLifeLock, NortonLifeLock Logo, Checkmark Logo, Norton, LifeLock ಮತ್ತು LockMan Logo ಇವು ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ದೇಶಗಳಲ್ಲಿ NortonLifeLock Inc. ಅಥವಾ ಅದರ ಅಂಗಸಂಸ್ಥೆಗಳ ವ್ಯಾಪಾರಚಿಹ್ನೆಗಳು ಅಥವಾ ನೋಂದಾಯಿತ ವ್ಯಾಪಾರಚಿಹ್ನೆಗಳಾಗಿವೆ. Google Chrome ಎಂಬುದು Google, LLC ಯ ವ್ಯಾಪಾರಚಿಹ್ನೆಯಾಗಿದೆ. ಇತರ ಹೆಸರುಗಳು ಅವುಗಳ ಆಯಾ ಮಾಲೀಕರ ವ್ಯಾಪಾರಚಿಹ್ನೆಗಳಾಗಿರಬಹುದು.