ಸ್ಕ್ರೀನ್‌ಶಾಟ್‌ಗಳು

ವಿವರಣೆ

ಎಲ್ಲ XML ದಾಖಲೆಗಳಿಗೆ XSLT ಬೆಂಬಲವನ್ನು ತುಂಬಿಕೊಡುವ ಹೆಚ್ಚುವರಿ ಕೋಡ್ ಅನ್ವಯಿಸುತ್ತದೆ. ಮುಂದಿನ ದಿನಗಳಲ್ಲಿ ವೆಬ್ ಬ್ರೌಸರ್‌ಗಳಿಂದ XSLT (ಎಕ್ಸ್‌ಟೆನ್ಸಿಬಲ್ ಸ್ಟೈಲ್‌ಶೀಟ್ ಲ್ಯಾಂಗ್ವೇಜ್ ಟ್ರಾನ್ಸ್‌ಫಾರ್ಮೇಷನ್ಸ್) ತೆಗೆದುಹಾಕುವ ಸಾಧ್ಯತೆ ಇರುವುದರಿಂದ, ಕಾರ್ಯನಿರ್ವಹಣೆಯನ್ನು ಉಳಿಸಿಕೊಳ್ಳಲು ಈ ವಿಸ್ತರಣೆಯನ್ನು ಬಳಸಬಹುದು. XSLT ಸಂಸ್ಕರಣಾ ಸೂಚನೆಗಳನ್ನು (ಉದಾ. `<?xml-stylesheet ...?>`) ಒಳಗೊಂಡಿರುವ ಎಲ್ಲ ಕಚ್ಚಾ XML ಕಡತಗಳಿಗೆ ಈ ವಿಸ್ತರಣೆಯು XSLT ಬೆಂಬಲವನ್ನು ತುಂಬಿಕೊಡುವ ಹೆಚ್ಚುವರಿ ಕೋಡ್ (https://github.com/mfreed7/xslt_polyfill) ಅನ್ವಯಿಸುತ್ತದೆ. Javascript ಮೂಲಕ ಬಳಕೆಯೂ ಕಾರ್ಯನಿರ್ವಹಿಸುತ್ತಿರಲು ಹೆಚ್ಚುವರಿ ಬೆಂಬಲ ಹೊಂದಿರುವ XSLTProcessor ಆವೃತ್ತಿಯನ್ನೂ ಸೇರಿಸುತ್ತದೆ. XML ಕಡತವು XSLT ಬಳಸದಿದ್ದರೆ ಅಥವಾ ಬ್ರೌಸರ್ XSLT ಗೆ ಅಂತರ್ನಿರ್ಮಿತ ಬೆಂಬಲ ಹೊಂದಿದ್ದರೆ, ಈ ವಿಸ್ತರಣೆಯು ಪುಟದ ಮೇಲೆ ಪರಿಣಾಮ ಬೀರುವುದಿಲ್ಲ. **ಪ್ರಮುಖ ವೈಶಿಷ್ಟ್ಯಗಳು:** * **ಸ್ವಯಂಚಾಲಿತ ಪರಿವರ್ತನೆ:** ವಿಸ್ತರಣೆಯು XML ಕಡತಗಳನ್ನು ಸ್ವಯಂಚಾಲಿತವಾಗಿ ಗುರುತಿಸಿ, ಲಿಂಕ್ ಮಾಡಲಾದ XSLT ಸ್ಟೈಲ್‌ಶೀಟ್ ಇದ್ದರೆ ಅದನ್ನು ಅನ್ವಯಿಸುತ್ತದೆ. * **ಗೌಪ್ಯತೆಗೆ ಆದ್ಯತೆ:** ಎಲ್ಲ ಸಂಸ್ಕರಣೆಯೂ ನಿಮ್ಮ ಕಂಪ್ಯೂಟರ್‌ನಲ್ಲೇ ಸ್ಥಳೀಯವಾಗಿ ನಡೆಯುತ್ತದೆ. ಈ ವಿಸ್ತರಣೆಯು ನಿಮ್ಮ ಯಾವುದೇ ಡೇಟಾ ಅಥವಾ ಬ್ರೌಸಿಂಗ್ ಚಟುವಟಿಕೆಯನ್ನು ಸಂಗ್ರಹಿಸುವುದಿಲ್ಲ, ಉಳಿಸುವುದಿಲ್ಲ ಅಥವಾ ರವಾನಿಸುವುದಿಲ್ಲ; ಮುಂದೆ ಎಂದಿಗೂ ಹಾಗೆ ಮಾಡುವುದಿಲ್ಲ. ಕಚ್ಚಾ XML ಅನ್ನು ವೀಕ್ಷಿಸಬಹುದಾದ HTML ಗೆ ಪರಿವರ್ತಿಸಲು XML ಪುಟಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಈ ವಿಸ್ತರಣೆ (ಮತ್ತು ಅದರಲ್ಲಿರುವ ಹೆಚ್ಚುವರಿ ಬೆಂಬಲದ ಕೋಡ್) ಮುಕ್ತ ಮೂಲದ್ದಾಗಿದೆ. ನೀವು ಕೊಡುಗೆ ನೀಡಬಹುದು ಅಥವಾ ದೋಷಗಳನ್ನು ವರದಿ ಮಾಡಬಹುದು: https://github.com/mfreed7/xslt_extension