ಸ್ಕ್ರೀನ್ಶಾಟ್ಗಳು
ವಿವರಣೆ
ನಂತರ ಮತ್ತೆ ನೋಡಲು ಬಯಸುವ ವಿಷಯಗಳನ್ನು ಉಳಿಸಿ.
ಸಮಯವಿಲ್ಲವೇ? ಸಮಸ್ಯೆಯಿಲ್ಲ
ನೋಡಲು ಅಥವಾ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಹಂಚಿಕೊಳ್ಳಲು ಬಯಸುವ ಹಾಸ್ಯ ವೀಡಿಯೊ, ವ್ಯಾಯಾಮ, ಅಡುಗೆ ವಿಧಾನ ಅಥವಾ ಲೇಖನ ಕಂಡಿದ್ದೀರಾ, ಆದರೆ ಸಮಯವಿಲ್ಲವೇ? Chrome ಗಾಗಿ Save to Facebook ವಿಸ್ತರಣೆಯು ಇಂಟರ್ನೆಟ್ನಲ್ಲಿ ಕಾಣುವ ಇಂತಹ ಎಲ್ಲ ಆಸಕ್ತಿಕರ ವಿಷಯಗಳನ್ನು ಉಳಿಸಿ ನಂತರ ಸುಲಭವಾಗಿ ಹುಡುಕಲು ನೆರವಾಗುತ್ತದೆ.
ವ್ಯವಸ್ಥಿತವಾಗಿ ಇಡಿ
ಇಂಟರ್ನೆಟ್ನಿಂದ Facebook ಗೆ ವಿಷಯವನ್ನು ಉಳಿಸುವಾಗ, ಸಂಗ್ರಹಗಳ ಆಯ್ಕೆಗಳನ್ನು ತೋರಿಸಿ ಅದನ್ನು ವ್ಯವಸ್ಥಿತವಾಗಿ ಇಡಲು ನಾವು ನೆರವಾಗುತ್ತೇವೆ. ವಿಷಯವನ್ನು ಈಗಿರುವ ಸಂಗ್ರಹಕ್ಕೆ ಸೇರಿಸಿ ಅಥವಾ ಹೊಸದನ್ನು ರಚಿಸಿ—ನಂತರ ನೋಡಲು ಅಥವಾ ಹಂಚಿಕೊಳ್ಳಲು ಸಿದ್ಧರಾದಾಗ ಅದನ್ನು ಹುಡುಕುವುದು ಸುಲಭವಾಗುತ್ತದೆ. ನೀವು ಎಷ್ಟು ಬೇಕಾದರೂ ಸಂಗ್ರಹಗಳನ್ನು ರಚಿಸಬಹುದು ಮತ್ತು ಇಷ್ಟದ ಹೆಸರು ಕೊಡಬಹುದು.
ನಿಮಗಾಗಿ ಮಾತ್ರ (ನೀವು ಹಂಚಿಕೊಳ್ಳುವವರೆಗೆ)
ಉಳಿಸಿದ ವಿಷಯಗಳನ್ನು ನೀವು ಮಾತ್ರ ನೋಡಬಹುದು ಮತ್ತು ತೆರೆಯಬಹುದು; ಅವು ನಿಮ್ಮ ಸ್ವಂತ ಖಾಸಗಿ ಉಳಿಸಿದ ವಿಷಯಗಳ ಪಟ್ಟಿಯಲ್ಲಿರುತ್ತವೆ. ಅಲ್ಲಿಂದ ಅವನ್ನು ನಿಮ್ಮ ಟೈಮ್ಲೈನ್ನಲ್ಲಿ, ಗುಂಪಿನಲ್ಲಿ ಅಥವಾ Facebook ನ ಬೇರೆಡೆ ಹಂಚಿಕೊಳ್ಳಬಹುದು. ಹಂಚಿಕೊಂಡ ಸಂಗ್ರಹಗಳ ವೈಶಿಷ್ಟ್ಯದಿಂದ ಉಳಿಸಿದ ವಿಷಯಗಳ ಸಂಪೂರ್ಣ ಸಂಗ್ರಹವನ್ನೂ ಆಯ್ಕೆಮಾಡಿದ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.
ಎಲ್ಲಿಂದಾದರೂ ಉಳಿಸಿದ ವಿಷಯಗಳನ್ನು ನೋಡಿ
ಬ್ರೌಸರ್ನಲ್ಲಿ ಎಲ್ಲಿದ್ದರೂ Facebook ನಲ್ಲಿ ಉಳಿಸಿದ ವಿಷಯಗಳು ಮತ್ತು ಸಂಗ್ರಹಗಳನ್ನು ಬೇಗನೆ ತೆರೆಯಬಹುದು. Save to Facebook ಐಕಾನ್ ಕ್ಲಿಕ್ ಮಾಡಿದ ಬಳಿಕ ಮೇಲಿನ ಬಲ ಮೂಲೆಯ “ಎಲ್ಲವನ್ನೂ ನೋಡಿ” ಲಿಂಕ್ ಕ್ಲಿಕ್ ಮಾಡಿ; ನಿಮ್ಮ ಉಳಿಸಿದ ವಿಷಯಗಳ ಪಟ್ಟಿ ಪ್ರತ್ಯೇಕ ವಿಂಡೋದಲ್ಲಿ ತೆರೆಯುತ್ತದೆ.
ಮುಂದಿನ ಬಾರಿ ಅನುಕೂಲವಿಲ್ಲದ ಸಮಯದಲ್ಲಿ ಆಸಕ್ತಿಕರ ವಿಷಯ ಸಿಕ್ಕರೆ, Save to Facebook ವಿಸ್ತರಣೆಯನ್ನು ಬಳಸಿ. ಅದನ್ನು ನೋಡಲು ಸಿದ್ಧರಾದಾಗ Facebook ಸುದ್ದಿ ಫೀಡ್ನ ಎಡಭಾಗದ ಮೆನುವಿನಲ್ಲಿ “ಉಳಿಸಿದ ವಿಷಯಗಳು ಮತ್ತು ಸಂಗ್ರಹಗಳು” ಆಯ್ಕೆಮಾಡಿ ಅಥವಾ ಬ್ರೌಸರ್ನಲ್ಲಿ www.facebook.com/saved ಟೈಪ್ ಮಾಡಿ.
Facebook ನಲ್ಲಿನ ಉಳಿಸಿದ ವಿಷಯಗಳು ಮತ್ತು ಸಂಗ್ರಹಗಳ ಬಗ್ಗೆ ಇನ್ನಷ್ಟು ತಿಳಿಯಲು https://www.facebook.com/help/516581611792218?helpref=related ನೋಡಿ.
ಈ ವೈಶಿಷ್ಟ್ಯವನ್ನು ಬಳಸುವ ಮೂಲಕ ನೀವು Facebook ನ ಡೇಟಾ ನೀತಿ ಮತ್ತು ಸೇವಾ ನಿಯಮಗಳಿಗೆ ಒಪ್ಪುತ್ತೀರಿ. ಅವು https://www.facebook.com/legal/terms ಮತ್ತು https://www.facebook.com/about/privacy ನಲ್ಲಿ ಲಭ್ಯವಿವೆ.