Lucidchart for Education
ID
gdbabpaggdgcakhjllleobffeghmhjmeಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಇಮೇಲ್ ವಿಳಾಸ ಹೊಂದಿರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕವರ್ಗಕ್ಕಾಗಿ ರೇಖಾಚಿತ್ರ ರಚನಾ ತಂತ್ರಾಂಶ.
ಸ್ಕ್ರೀನ್ಶಾಟ್ಗಳು
ವಿವರಣೆ
ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಇಮೇಲ್ ವಿಳಾಸ ಹೊಂದಿರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕವರ್ಗಕ್ಕಾಗಿ ರೇಖಾಚಿತ್ರ ರಚನಾ ತಂತ್ರಾಂಶ.
Lucidchart ಒಂದು ವೆಬ್ ಆಧಾರಿತ ರೇಖಾಚಿತ್ರ ರಚನಾ ಸಾಧನವಾಗಿದ್ದು, ರೇಖಾಚಿತ್ರಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಬಿಡಿಸಲು ನೆರವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ನಿಯೋಜಿತ ಕೆಲಸಗಳನ್ನು ಒಬ್ಬರೇ ಮಾಡಬಹುದು ಅಥವಾ ಯಾವುದೇ ಸಂಖ್ಯೆಯ ಸಹಪಾಠಿಗಳೊಂದಿಗೆ ಸೇರಿ ನೈಜ ಸಮಯದಲ್ಲಿ ರೇಖಾಚಿತ್ರಗಳನ್ನು ರಚಿಸಬಹುದು ಮತ್ತು ಸಂಪಾದಿಸಬಹುದು -- ಗುಂಪು ಯೋಜನೆಗಳಿಗೆ ಇದು ಬಹಳ ಉಪಯುಕ್ತ.
Lucidchart ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಎಲ್ಲ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡ ಉಚಿತ ಶೈಕ್ಷಣಿಕ ಪರವಾನಗಿಗಳನ್ನು ಒದಗಿಸುತ್ತದೆ. ಪ್ರಾತ್ಯಕ್ಷಿಕೆಯನ್ನು ಪ್ರಾರಂಭಿಸಲು 'Chrome ಗೆ ಸೇರಿಸಿ' ಕ್ಲಿಕ್ ಮಾಡಿ ಮತ್ತು ಉಚಿತ ಪರವಾನಗಿ ಪಡೆಯಲು ಪ್ರಾತ್ಯಕ್ಷಿಕೆಯಲ್ಲಿ 'ಉಚಿತವಾಗಿ ನೋಂದಾಯಿಸಿ' ಕ್ಲಿಕ್ ಮಾಡಿ. ಇಡೀ ಶಾಲೆಯನ್ನು ನೋಂದಾಯಿಸಲು ಡೊಮೇನ್ ನಿರ್ವಾಹಕರೂ ಇದೇ ಕ್ರಮವನ್ನು ಅನುಸರಿಸಬಹುದು.
ನೂರಾರು ಮಾದರಿಗಳು ಮತ್ತು ಉದಾಹರಣೆಗಳು:
- ಹರಿವುಚಿತ್ರಗಳು
- ವೆನ್ ರೇಖಾಚಿತ್ರಗಳು
- ಮಾಹಿತಿಯನ್ನು ದೃಶ್ಯರೂಪದಲ್ಲಿ ವ್ಯವಸ್ಥಿತಗೊಳಿಸುವ ಚಿತ್ರಗಳು
- ಮನೋನಕ್ಷೆಗಳು
- ಸಂಸ್ಥೆಯ ರಚನಾ ಚಿತ್ರಗಳು
- ವಿನ್ಯಾಸದ ರೂಪುರೇಷೆಗಳು / ಅಣಕು ಮಾದರಿಗಳು
- UML / ERD
ಶಕ್ತಿಶಾಲಿ ಮತ್ತು ಬಳಸಲು ಸುಲಭ:
- ನೂರಾರು ಆಕಾರಗಳಲ್ಲಿ ಆಯ್ಕೆಮಾಡಿ
- ನಿಮ್ಮ ಸ್ವಂತ ಚಿತ್ರಗಳನ್ನು ಸೇರಿಸಲು ಎಳೆದು ಬಿಡಿ
- PDF, PNG ಮತ್ತು JPG ರೂಪದಲ್ಲಿ ರಫ್ತುಮಾಡಿ
- ಬ್ಲಾಗ್ಗಳು ಅಥವಾ ವಿಕಿಗಳಲ್ಲಿ ರೇಖಾಚಿತ್ರಗಳನ್ನು ಅಳವಡಿಸಿ
- ಕ್ಲಿಕ್ ಮಾಡಬಹುದಾದ ಪ್ರದೇಶಗಳು ಮತ್ತು ವಿವಿಧ ಸ್ಥಿತಿಗಳನ್ನು ಹೊಂದಿರುವ ಸಂವಾದಾತ್ಮಕ ಅಣಕು ಮಾದರಿಗಳು
ಸಹಯೋಗ:
- ಬದಲಾವಣೆಗಳು ತಕ್ಷಣವೇ ಸಿಂಕ್ ಆಗುವ ನೈಜ ಸಮಯದ ಸಹಯೋಗ
- ಏಕಕಾಲದಲ್ಲಿ ಸಹಯೋಗ ಮಾಡುವವರ ಸಂಖ್ಯೆಗೆ ಮಿತಿಯಿಲ್ಲ
- ಸಂಪೂರ್ಣ ಪರಿಷ್ಕರಣೆ ಇತಿಹಾಸದೊಂದಿಗೆ ಶಕ್ತಿಶಾಲಿ ಆವೃತ್ತಿ ನಿಯಂತ್ರಣ
ವಿಮರ್ಶೆಗಳು:
FreeTech4Teachers.com: “ಚಿತ್ರವನ್ನು ರಚಿಸುವ ಪ್ರಕ್ರಿಯೆಯು ಬಹುಮುಖ ಸಮಸ್ಯೆ ಅಥವಾ ಪರಿಕಲ್ಪನೆಯ ವಿವಿಧ ಭಾಗಗಳನ್ನು ದೃಶ್ಯೀಕರಿಸಲು ಮತ್ತು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಬಹುದು. Lucidchart ವಿದ್ಯಾರ್ಥಿಗಳಿಗೆ ಚಿತ್ರಗಳನ್ನು ರಚಿಸಲು ಮತ್ತು ತಮ್ಮ ಚಿತ್ರಗಳನ್ನು ಹಂಚಿಕೊಳ್ಳಲು ಸುಲಭವಾಗಿಸುತ್ತದೆ.”
TeachingHistory.org: “ವೆಬ್ ಆಧಾರಿತ, ಸರಳವಾದ ಇಂಟರ್ಫೇಸ್ ಪ್ರಕಟಣೆಗಾಗಿ ರೇಖಾಚಿತ್ರಗಳು ಮತ್ತು ಹರಿವುಚಿತ್ರಗಳನ್ನು ಸಹಯೋಗದಲ್ಲಿ ರಚಿಸಲು ಅನುವು ಮಾಡಿಕೊಡುತ್ತದೆ. ವೇಗವಾಗಿ ಕೆಲಸ ಮಾಡಲು, ಸುಲಭವಾಗಿ ಕಲಿಯಲು ಮತ್ತು ಸಹಯೋಗದಲ್ಲಿ ಬಳಸಲು ಅನುಕೂಲವಾಗಿರುವ ಈ ಸಾಧನವನ್ನು ನಾನು ಶಿಫಾರಸು ಮಾಡುತ್ತೇನೆ.”