ಸ್ಕ್ರೀನ್ಶಾಟ್ಗಳು
ವಿವರಣೆ
ಆನ್ಲೈನ್ ಫಾರ್ಮ್ಗಳು ಮತ್ತು ಸಮೀಕ್ಷೆಗಳನ್ನು ರಚಿಸಿ
ಸರಳ ಆನ್ಲೈನ್ ಫಾರ್ಮ್ ಬಳಸಿ ಆಹ್ವಾನಿತರಿಂದ ಹಾಜರಾತಿಯ ದೃಢೀಕರಣಗಳನ್ನು ಸಂಗ್ರಹಿಸಿ, ಸಮೀಕ್ಷೆ ನಡೆಸಿ ಅಥವಾ ತಂಡದ ಸದಸ್ಯರ ಪಟ್ಟಿಯನ್ನು ತ್ವರಿತವಾಗಿ ರಚಿಸಿ. ನಂತರ ಸ್ಪ್ರೆಡ್ಶೀಟ್ನಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾದ ಫಲಿತಾಂಶಗಳನ್ನು ನೋಡಿ.
ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ
ಸರಳ ಅಥವಾ ಸವಿವರವಾದ ಆನ್ಲೈನ್ ಸಮೀಕ್ಷೆಗಳನ್ನು ರಚಿಸಿ. ಅವುಗಳನ್ನು ಲಿಂಕ್ ಮೂಲಕ ಹಂಚಿಕೊಳ್ಳಿ, ನಿಮ್ಮ ವೆಬ್ಸೈಟ್ನಲ್ಲಿ ಎಂಬೆಡ್ ಮಾಡಿ ಅಥವಾ ನೇರವಾಗಿ ಇಮೇಲ್ನೊಳಗೂ ಸೇರಿಸಿ.
ನಿಶ್ಚಿಂತೆಯಿಂದ ಕುಳಿತು ಫಲಿತಾಂಶಗಳು ಬರುವುದನ್ನು ನೋಡಿ
ನಿಮ್ಮ ಪ್ರಶ್ನೆಗಳಿಗೆ ಬಂದ ಎಲ್ಲ ಪ್ರತಿಕ್ರಿಯೆಗಳನ್ನು ಸ್ಪ್ರೆಡ್ಶೀಟ್ನಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಗುತ್ತದೆ, ಹೀಗಾಗಿ ದತ್ತಾಂಶವನ್ನು ವಿಂಗಡಿಸುವುದು ಮತ್ತು ವಿಶ್ಲೇಷಿಸುವುದು ಬಹಳ ಸುಲಭ.
ಎಲ್ಲಿಂದಲಾದರೂ, ಯಾವಾಗ ಬೇಕಾದರೂ ಪ್ರವೇಶಿಸಿ
ನಿಮ್ಮ ಫಾರ್ಮ್ನ ಎಲ್ಲ ದತ್ತಾಂಶವನ್ನು ಸ್ವಯಂಚಾಲಿತವಾಗಿ Google Sheetsನಲ್ಲಿ ಜೋಡಿಸಿ Google Driveನಲ್ಲಿ ಸಂಗ್ರಹಿಸಲಾಗುತ್ತದೆ. ನೀವು ಎಲ್ಲಿಗೆ ಹೋದರೂ, ಯಾವುದೇ ಸಾಧನದಿಂದ ಅದನ್ನು ಪ್ರವೇಶಿಸಿ.